ನಾಗರ ಪಂಚಮಿ
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಡೆಯುವುದು.
ಕದಿರು(ತೆನೆಉತ್ಸವ)
ಭಾದ್ರಪದ ಶುಕ್ಲದ ಹಸ್ತ ನಕ್ಷತ್ರದಂದು ನಡೆಯುವುದು.
ಗಣೇಶ ಚತುರ್ಥಿ
ಭಾದ್ರಪದ ಶುಕ್ಲದ ಚೌತಿಯಂದು ೧೦೮ ಕಾಯಿ ಗಣಹೋಮ ಜರಗಿ ನಂತರ ಮದ್ಯಾಹ್ನ ಮಹಾಪೂಜೆ ಜರಗುವುದು.
ನವರಾತ್ರಿ ಪೂಜೆ
ಅಶ್ವಯುಜ ಶುಕ್ಲ ಪಕ್ಷದ ಪಾಡ್ಯ ತಿಥಿಯಿಂದ ನವಮಿ ತಿಥಿಯವರೆಗೆ ದುರ್ಗಾದೇವಿಗೆ ವಿಶೇಷ ಪೂಜೆ ಜರಗುವುದು.
ದೀಪಾವಳಿಯ ಬಲೀಂದ್ರ ಹಾಕುವುದು
ಅಶ್ವಯುಜ ಅಮವಾಸ್ಯೆ ತಿಥಿಯಂದು ಮಿದಲ್ಗೊಂಡು ದಿನಂಪ್ರತಿ ಹೊತ್ತು ಪೂಜೆ ಬಲಿ ಉತ್ಸವವು ಪತ್ತನಾಜೆವರೆಗೆ(ಮೇ ಅಂತ್ಯದವರೆಗೆ) ಜರಗುವುದು.
ಪೂಕರೆ ಉತ್ಸವ
ಕಾರ್ತಿಕ ಮಾಸದ ಹಸ್ತನಕ್ಷತ್ರದ ದಿವಸ ನಡೆಯುವುದು.
ಲಕ್ಷದೀಪೋತ್ಸವ
ಕಾರ್ತಿಕ ಮಾಸದ ಅಮವಾಸ್ಯೆ ದಿನ ರಾತ್ರಿ ಉತ್ಸವ ನಡೆಯುತ್ತದೆ ವಿಶೇಷವಾಗಿ ಕೆರೆಯಲ್ಲಿ ತೆಪ್ಪೋತ್ಸವ ಜರಗುವುದು.
ಮಕರ ಸಂಕ್ರಮಣ
ಕನಕಾಭಿಷೇಕ.
ಶಿವರಾತ್ರಿ ಉತ್ಸವ
ಶಿವರಾತ್ರಿ ದಿನದಂದು ಉತ್ಸಹ ಹಾಗೂ ಕೆರೆಯಲ್ಲಿ ತೆಪ್ಪೋತ್ಸವ ವಿಜ್ರಂಭಣಯಿಮ್ದ ಜರಗುತ್ತದೆ. ಬೆಳಗ್ಗಿನ ತನಕ ಭಜನೆ ಹಾಗೂ ಜಾಗರಣೆ ಭಕ್ತಾಧಿಗಳು ನೆರೆವೇರಿಸುತ್ತಾರೆ.
ವಾಷಿಕ ಜಾತ್ರೋತ್ಸವ
ಶ್ರೀ ದೇವಾಸ್ಥಾನದಲ್ಲಿ ವಾಷಿಕ ಜಾತ್ರೆಯು ಪ್ರತೀ ವರ್ಷ ಎಪ್ರಿಲ್ ೧೦ ರಿಂದ ೨೦ ರ ತನಕ ಜರಗುತ್ತದೆ. ವಿಶೇಷವಾಗಿ ಎ.೧೬ ರಂದು ಬಲ್ನಾಡು ದಂಡುನಾಯಕ ಉಳ್ಳಾಲ್ತಿ ಶ್ರೀ ಕ್ಷೇತ್ರಕ್ಕೆ ಆಗಮಿಸುವುದು. ನಂತರ ಉತ್ಸವ ಸಣ್ಣ ರಥೋತ್ಸವ ಪಾಲಕು (ಪಲ್ಲಕ್ಕಿ) ಉತ್ಸವ ಹಾಗೂ ಕೆರೆಯಲ್ಲಿ ತೆಪ್ಪೋತ್ಸವ ಜರಗುತ್ತದೆ. ಪ್ರತಿ ವರ್ಷ ಎಪ್ರಿಲ್ ೧೮ ರಂದು ಜಾತ್ರೆ ಅಂಗವಾಗಿ ಬೆಳಿಗ್ಗೆ ತುಲಾಭಾರ ಸೇವೆ, ಸಾಯಂಕಾಲ ವೀರಮಮಂಗಲ ದೇವರು ಅವಭ್ರತ ಸ್ನಾನಕ್ಕೆ ಸವಾರಿ ಜರಗುತ್ತದೆ.
ಪತ್ತನಾಜೆ
ಮೇ ತಿಂಗಳ ಅಂತ್ಯದಲ್ಲಿ ಪ್ರತೀ ವರ್ಷ ದೇವರ ಬಲಿ ಉತ್ಸವವು ನಡೆದು ದೇವರ ಉತ್ಸವ ಮೂರ್ತಿ ಯನ್ನು ಪಾಣಿಪೀಠದಲ್ಲಿ ಇರಿಸಿ ಮಂಗಳಾರತಿ ಆಗಿ ದೇವರ ಒಳಗಾಗಿ ಉತ್ಸವ ಮುಕ್ತಾಯಗೊಳ್ಳುತ್ತದೆ.