ತನ್ನ ಮಧ್ಯಾಹ್ನದ ಭೋಜನಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವನ್ನಾಗಿಟ್ಟಕೊಂಡಿದ ಆ ವ್ರದ್ಧ ವಿಪ್ರರು ತನ್ನ ಸಂಪುಟದಿಂದ, ಸೂರ್ಯಪ್ರಭೆಯಿಂದ ಕಂಗೊಳಿಸುವ ಸುಂದರಾಕ್ರತಿಯ ಶಿವಲಿಂಗವೊಂದನ್ನು ತೆಗೆದು ಗೋವಿಂದ ಭಟ್ಟರ ಕೈಗಿತ್ತು ಇದನ್ನು ಕೈಯಲ್ಲಿಟ್ಟುಕೊಂಡೇ ಪೊಜಿಸಬೇಕೆಂದು ತಿಳಿಸಿ, ತಾವು ಕುಮಾರಧಾರಾ ನದಿಗೆ ಸ್ನಾನಕ್ಕೆಂದು ಹೋದರು.
ಬಹು ಪ್ರಾಚೀನ ಕಾಲದಲ್ಲಿ ವೇದ ವೇದಾಂತ ಪಾರಂಗತರಾದ ಶೈವ ಸಂಪ್ರದಾಯದ ವಿಪ್ರಾರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣಾ ಪಥದಲ್ಲಿ ಸಂಚರಿಸುತ್ತಿದ್ದರು.ಶಿವಾರ್ಚನೆಯಲ್ಲೇ ಜೀವನವನ್ನು ಧನ್ಯವನ್ನಾಗಿ ಮಾಡಿಕೊಂಡಿದ್ದ ಈ ವಿಪ್ರೋತ್ತಮರು ಒಂದು ದಿನ ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದ ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ಆಗ ಈ ವ್ರದ್ಧ ವಿಪ್ರರನ್ನು ಭೇಟಿಯಾಗಿ ಅವರ ವ್ಯಕ್ತಿತ್ವದಿಂದ ಆಕರ್ಷಿತರಾದ ಗೋವಿಂದ ಭಟ್ಟರೆಂಬವರು ಅವರಲ್ಲಿ ಕುಶಲ ಪ್ರಶ್ನೆಗಳನ್ನು ಹಾಕಿದರು.
-
No Records Found
No Record(s) Found